ಸಿದ್ಧಾರೂಢರು (ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ)

ಸದ್ಗುರು ಸಿದ್ಧಾರೂಢರು ಹುಬ್ಬಳ್ಳಿಯು ಎಷ್ಟು ಪ್ರಸಿದ್ಧವೂ ಅಷ್ಟೇ ಹುಬ್ಬಳಿಯಲ್ಲಿ ಸಿದ್ಧಾರೂಢ ಅಜ್ಜನ ಮಠವೂ ಪ್ರಸಿದ್ಧ ಸತತ ದಾಸೋಹ ಶಿಕ್ಷಣದಿಂದ ಅಜ್ಜನ ಮಠವು ಪ್ರಸಿಧ್ಧವಾಗಿದೆ. ಬಂದ ಭಕ್ತರು ಹಸಿದವರು ಪ್ರಸಾದ ಸೇವಿಸಿ ಅಜ್ಜನ ಆಶಿರ್ವಾದ ತೆಗೆದುಕೊಂಡು ಹಿಂತಿರುಗುತ್ತಾರೆ. ಸಿದ್ಧಾರೂಡರು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಮುಕ್ತವಾಗಿ ಪಠಣ ಮಾಡಲು ಸಾರಿದರು. ಇವರು ಮೂಲತಃ ಚಳಕಾಪುರದವರೂ ಜನನ 1836 ಇವರು ತಮ್ಮ 6ನೇಯ ವಯಸ್ಸಿನಲ್ಲಿಯೇ ಮನೆಯನ್ನು ಬಿಟ್ಟು ಹೊರಬಂದು ಗುರುಗಳಿಗಾಗಿ ಹುಡುಕಾಟ ನಡೆಸಿದರು ಅನಂತರ ಇವರು ದೇಶದ ನಾನಾ ಭಾಗಗಳಲ್ಲಿ ಸಂಚಾರ ಮಾಡಿ ಹುಬ್ಬಳ್ಳಿಯ ಜನರ ಪುಣ್ಯವೇನೋ ಹುಬ್ಬಳ್ಳಿಯಲ್ಲಿ ನೆಲೆಸಿದರು ಯಾವುದೇ ತಾರತಮ್ಯವಿಲ್ಲದೆ ನಂಬಿ ಬಂದ ಭಕ್ತರನ್ನು ಅಭಯ ಹಸ್ತವನ್ನಿಟ್ಟು ರಕ್ಷಿಸಿದರು. ಗುರುನಾಥರೂಡರು ಸಿದ್ಧಾರೂಢರ ಶಿಷ್ಯರಾಗಿದ್ದರು. ಅಜ್ಜನ ಮಠ ಎಷ್ಟು ಪ್ರಸಿದ್ದಿ ಹೊಂದಿತ್ತು ಅಂದರೆ ಆಗಿನ ಕಾಲದಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರು ರಾಜರು ಹಲವಾರು ಸಾಧು ಸಂತರು ಅಜ್ಜನ ಮಠಕ್ಕೆ ಬಂದು ಹೋಗುತ್ತಿದ್ದರು. ಸಿದ್ಧಾರೂಢ ಅಜ್ಜನ ರಥೋತ್ಸವ ಸಿದ್ಧಾರೂಢ ಅಜ್ಜನ ರಥೋತ್ಸವ ಪ್ರತಿ...