ಬದಾಮಿ ಬನಶಂಕರಿ ದೇವಸ್ಥಾನ

ಬದಾಮಿಯ ಬನಶಂಕರಿಯು ಅತ್ಯಂತ ಪುರಾತನ ದೇವಸ್ಥಾವಾಗಿದ್ದು ಇದರ ನಿರ್ಮಾಣದ ಅವಧಿ ಅಂದಾಜು 7ನೇ ಶತಮಾನ.

ಇದು ಚಾಲುಕ್ಯರಿಂದ ನಿರ್ಮಾಣವಾದ ದೇವಾಲಯವಾಗಿದ್ದು ತಾಯಿ ಬನಶಂಕರಿ ದೇವಿಯು ಚಾಲುಕ್ಯರ ಆರಾಧ್ಯ ದೈವವಾಗಿದ್ದಾಳೆ.
ತಾಯಿ ಬನಶಂಕರಿಯು ಅರಣ್ಯದಲ್ಲಿ ವಾಸವಾಗಿರುವುದರಿಂದ ತಾಯಿಗೆ ಬನಶಂಕರಿ ಅಥವಾ ವನಶಂಕರಿ ಎಂದು ಹೆಸರು ಬಂದಿತು.
ಭೂಮಿಯಲ್ಲಿ ಮಳೆ ಹಾಗೂ ಬೆಳೆ ಇಲ್ಲದ ಸಮಯದಲ್ಲಿ ಭಕ್ತರೆಲ್ಲರೂ ಹಸಿವಿನಿಂದ ಬಳಲುತ್ತಿರುವಾಗ ದೇವಿಯು ತನ್ನ ದೇಹದ ಶಾಖದಿಂದ ಹಣ್ಣು ಮತ್ತು ಹಂಪಲು ಉತ್ಪತ್ತಿ ಮಾಡಿ ಆಹಾರವನ್ನು ನೀಡಿ ತಾಯಿಯು ಭಕ್ತರನ್ನು ಹರಸಿದಳು ಅದಕ್ಕಾಗಿ ದೇವಿಯನ್ನು ಶಾಖಂಬರಿ ದೇವಿ ಎಂದು ಕರೆಯುತ್ತಾರೆ. ದೇವಿಗೆ ಭಕ್ತರು ರಾಜ್ಯ ರಾಜ್ಯಗಳಿಂದ ಬಂದು ಪೂಜೆಯನ್ನು ಸಲ್ಲಿಸುತ್ತಾರೆ ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ದೇವಿಗೆ ಅತಿ ಹೆಚ್ಚು ಭಕ್ತರಿದ್ದಾರೆ.ದೇವಸ್ಥಾನದ ಸುತ್ತ ಹವನ ಮಂಟಪ,ಆಂಜನೇಯನ ಮೂರ್ತಿ, ಶಿವ ಹಾಗೂ ಹಲವಾರು ದೇವತೆಗಳು ವಾಸವಾಗಿದ್ದಾರೆ.

ತೀರ್ಥಗಳು
ದೇವಾಲಯದ ಸುತ್ತಲೂ ಹಲವಾರು ತೀರ್ಥಗಳು ಇದ್ದು ಬಂದ ಭಕ್ತರ ಪಾಪವನ್ನು ನಾಶ ಮಾಡಿ ಪುನೀತಗೊಳಿಸುತ್ತವೆ ಇದರಲ್ಲಿ ಮಾಲಿನಿ ತೀರ್ಥ, ಹರಿದ್ರಾ ತೀರ್ಥ, ಸರಸ್ವತಿ ತೀರ್ಥ, ಅಗಸ್ತ್ಯ ತೀರ್ಥ ,ಪದ್ಮ ತೀರ್ಥ, ತೈಲ ತೀರ್ಥ, ರಂಗ ತೀರ್ಥ, ಅಶ್ವತ ತೀರ್ಥ, ಭಾಸ್ಕರ ತೀರ್ಥ, ಕೋಟಿ ತೀರ್ಥ, ನಾಗೇಶ ತೀರ್ಥ, ವಿಷ್ಣು ಪುಷ್ಕರಣೆ,ವಶಿಷ್ಟ,ಕಶ್ಯಪ,ಅತ್ರಿ,ಭಾರದ್ವಾಜ,ವಿಶ್ವಾಮಿತ್ರ,ಗೌತಮ,ಜಮದಗ್ನಿ ತೀರ್ಥಗಳು ಪ್ರಮುಖವಾದವು.

ಪುರಾಣಕ್ಕೆ ಸಂಭಂದಿಸಿದ ಹಾಗೆ  
ಇ ದೇವಸ್ಥಾನಕ್ಕೆ ಸಂಬಂಧಿಸಿದ ಹಾಗೆ ಪುರಾಣದಲ್ಲಿ ಅನೇಕ ಉಲ್ಲೇಖಗಳಿವೆ ದೇವಿಯು ದುರ್ಗರಕ್ತ ಮತ್ತು ಧೂಮ್ರರಾಕ್ಷರೆಂಬ ದುಷ್ಟ ರಾಕ್ಷಸರನ್ನ ಸಂಹರಿಸಲು ಅವತಾರ ತಾಳಿ ಸಂಹರಿಸಿದ ನಂತರ ಘೋರ ರೂಪವನ್ನು ತ್ಯಜಿಸಲು ದೇವತೆಗಳು ಪ್ರಾರ್ಥಿಸಿದರು ದೇವಿಯ ಘೋರ ರೂಪವನ್ನು ಶಾಂತಗೊಳಿಸಲು ವಿಫಲವಾದಾಗ ದೇವಿಯ ಪರಮ ಭಕ್ತನಾದ ತ್ರಿದಂಡಿ ಮುನಿಗಳ ಹತ್ತಿರ ಬಂದು ಕೇಳಿದಾಗ ತ್ರಿದಂಡಿ ಮುನಿಗಳು ದೇವತೆಗಳ ಕೋರಿಕೆಯಂತೆ ಬಂದು ದೇವಿಯನ್ನು ಶಾಂತಗೊಳಿಸುತ್ತಾರೆ ಆನಂತರ ಎಲ್ಲ ದೇವತೆಗಳು ತಾಯಿಯನ್ನು ಬಂದು ಅಲ್ಲಿಯೇ ನೆಲೆಸಿ ಬಂದ ಭಕ್ತರನ್ನು ಹರಸು ಎಂದು ಕೇಳಿದಾಗ ದೇವಿಯು ತನ್ನ ಘೋರ ರೂಪವನ್ನು ತ್ಯಜಿಸಿ ತಿಲಕಾರಣ್ಯದಲ್ಲ ವಾಸ ಮಾಡುತ್ತಾಳೆ ಹಾಗೂ ನಂಬಿ ಬಂದ ಭಕ್ತರನ್ನು ಸಲಹುತ್ತಾಳೆ.ಅಗಸ್ತ್ಯ ಮುನಿಗಳು ವಿಂದ್ಯ ಪರ್ವತದ ಗರ್ವ ಹರಣ ಮಾಡಿ ಬನಶಂಕರಿ ಕ್ಷೇತ್ರಕ್ಕೆ ಬಂದು ನೆಲೆಸಿದರು ಎಂದು ಪ್ರತೀತಿ
ದೇವಸ್ಥಾನದ ಆಚರಣೆಗಳು
ಬನಶಂಕರಿ ಜಾತ್ರೆಯು ಅತಿ ದೊಡ್ಡ ಜಾತ್ರೆಯಾಗಿದ್ದು ಪ್ರತಿ ವರ್ಷ ಬನದ ಹುಣ್ಣಿಮೆಯ ದಿನ ನಡೆಯುತ್ತದೆ ಹಾಗೂ ಪ್ರಪಂಚದಲ್ಲಿ ಯಾವುದೇ ಜಾತ್ರೆಗೆ ಹೋಲಿಸಿದರೂ ಬನಶಂಕರಿ ಜಾತ್ರಾ ಮಹೋತ್ಸವವೂ ಅತಿ ದೊಡ್ಡ ಜಾತ್ರೆ ಹಾಗೂ ಅತಿ ಹೆಚ್ಚು ಜನರು ಜಾತ್ರಯ ಸಂದರ್ಭದಲ್ಲಿ ನಾನಾ ದೇಶದ ಭಾಗಗಳಿಂದ ಬಂದು ದೇವಿಯ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೋಳ್ಳುತ್ತಾರೆ.ಹಾಗೂ ಬಾದಾಮಿ ಬನಶಂಕರಿ ಶಂಭುಕೋ ಎಂದು  ಭಕ್ತರು ಕೂಗತ್ತಾ ದೇವಿಗೆ ಹಲವಾರು ಸೇವೆಗಳನ್ನು ಸಲ್ಲಿಸುತ್ತಾರೆ.

ದೇವಿಯ ನಿತ್ಯ ಪೂಜೆ
ದೇವಿಯ ನಿತ್ಯ ಪೂಜೆಯನ್ನು ಚೊಳಚಗುಡ್ಡದ ಅರ್ಚಕರು ನಿತ್ಯ ವಿಧಿ ವಿಧಾನಗಳೊಂದಿಗೆ ನೆರವೇರಿಸುತ್ತಾರೆ

ನಮೋ ಆದಿಶಕ್ತಿ ನಮೋ ಶಾಖಾಂಬರಿ ನಮೋ ಬನಶಂಕರಿ 

                  ಶ್ರೀ ಬನಶಂಕರಿ ಪ್ರಸಿದ

Popular posts from this blog

ಸಿದ್ಧಾರೂಢರು (ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ)

ವಿಶ್ವಗುರು ಮಹಾಮಾನವತಾವಾದಿ ಬಸವಣ್ಣ