ಸಿದ್ಧಾರೂಢರು (ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ)

                  ಸದ್ಗುರು ಸಿದ್ಧಾರೂಢರು                     
ಹುಬ್ಬಳ್ಳಿಯು ಎಷ್ಟು ಪ್ರಸಿದ್ಧವೂ ಅಷ್ಟೇ ಹುಬ್ಬಳಿಯಲ್ಲಿ ಸಿದ್ಧಾರೂಢ ಅಜ್ಜನ ಮಠವೂ ಪ್ರಸಿದ್ಧ ಸತತ ದಾಸೋಹ ಶಿಕ್ಷಣದಿಂದ ಅಜ್ಜನ ಮಠವು ಪ್ರಸಿಧ್ಧವಾಗಿದೆ. ಬಂದ ಭಕ್ತರು ಹಸಿದವರು ಪ್ರಸಾದ ಸೇವಿಸಿ ಅಜ್ಜನ ಆಶಿರ್ವಾದ ತೆಗೆದುಕೊಂಡು ಹಿಂತಿರುಗುತ್ತಾರೆ.
ಸಿದ್ಧಾರೂಡರು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಮುಕ್ತವಾಗಿ ಪಠಣ ಮಾಡಲು ಸಾರಿದರು.
          ಇವರು ಮೂಲತಃ ಚಳಕಾಪುರದವರೂ ಜನನ 1836 ಇವರು ತಮ್ಮ 6ನೇಯ ವಯಸ್ಸಿನಲ್ಲಿಯೇ ಮನೆಯನ್ನು  ಬಿಟ್ಟು ಹೊರಬಂದು ಗುರುಗಳಿಗಾಗಿ ಹುಡುಕಾಟ ನಡೆಸಿದರು ಅನಂತರ ಇವರು ದೇಶದ ನಾನಾ ಭಾಗಗಳಲ್ಲಿ ಸಂಚಾರ ಮಾಡಿ ಹುಬ್ಬಳ್ಳಿಯ ಜನರ ಪುಣ್ಯವೇನೋ ಹುಬ್ಬಳ್ಳಿಯಲ್ಲಿ ನೆಲೆಸಿದರು ಯಾವುದೇ ತಾರತಮ್ಯವಿಲ್ಲದೆ ನಂಬಿ ಬಂದ ಭಕ್ತರನ್ನು ಅಭಯ ಹಸ್ತವನ್ನಿಟ್ಟು ರಕ್ಷಿಸಿದರು.ಗುರುನಾಥರೂಡರು ಸಿದ್ಧಾರೂಢರ ಶಿಷ್ಯರಾಗಿದ್ದರು.ಅಜ್ಜನ ಮಠ ಎಷ್ಟು ಪ್ರಸಿದ್ದಿ ಹೊಂದಿತ್ತು ಅಂದರೆ ಆಗಿನ ಕಾಲದಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರು ರಾಜರು ಹಲವಾರು ಸಾಧು ಸಂತರು ಅಜ್ಜನ ಮಠಕ್ಕೆ ಬಂದು ಹೋಗುತ್ತಿದ್ದರು.
ಸಿದ್ಧಾರೂಢ ಅಜ್ಜನ ರಥೋತ್ಸವ ಸಿದ್ಧಾರೂಢ ಅಜ್ಜನ ರಥೋತ್ಸವ ಪ್ರತಿ ವರ್ಷ ಎರಡು ಬಾರಿ ನಡೆತೇತಿ ಒಂದು ಬಾರಿ ಶ್ರಾವಣ ಮಾಸದಲ್ಲಿ ತೆಪ್ಪ ರಥೋತ್ಸವ ಮತ್ತ ಶಿವರಾತ್ರಿಯ ದಿನ ನಡೆಯುವ ರಥೋತ್ಸವ ಅಜ್ಜನ ಜಾತ್ರಿ ಬಂದರ ಸಾಕೂ ಹುಬ್ಬಳ್ಳಿ ಜನ ಜಂಗುಳಿಯಿಂದ ತುಂಬಿ ತುಳುಕತೇತಿ ಅಜ್ಜನ ಜಾತ್ರೆಯ ಅನಭವವನ್ನು ಮಾತಿನಲ್ಲಿ ಹೇಳಾಕ ಸಾಧ್ಯವೇ ಇಲ್ಲ ಅಷ್ಟು ಚೆಂದ ಜಾತ್ರೆ ನಡಿತೇತಿ.
ಅಜ್ಜನ ಮಠದ ಬಗ್ಗೇ ಎಷ್ಟು ಹೇಳಿದರು ಕಡಿಮೇನ ಅಜ್ಜನ ಮಠಕ್ಕೆ ಬಂದು ಹೋದವರಿಗೆ ಗೊತ್ತು ಅಜ್ಜನ ಆಶಿರ್ವಾದದ ಮಹತ್ವ .

                     ಓಂ ನಮಃ ಶಿವಾಯ                     


                

Popular posts from this blog

ಬದಾಮಿ ಬನಶಂಕರಿ ದೇವಸ್ಥಾನ

ವಿಶ್ವಗುರು ಮಹಾಮಾನವತಾವಾದಿ ಬಸವಣ್ಣ