ವಿಶ್ವಗುರು ಮಹಾಮಾನವತಾವಾದಿ ಬಸವಣ್ಣ

ಬಸವಣ್ಣನವರು ಮಾದರಸ ಮತ್ತು ಮಾದಲಾಂಬಿಕೆಯ ಎಂಬ ಬ್ರಾಹ್ಮಣ ದಂಪತಿಯ ಪುತ್ರರಾಗಿ 1134ರಲ್ಲಿ ಜನಿಸಿದರು.ಇವರು ಸಮಾಜದಲ್ಲಿ ಅಸ್ಪ್ರುಷ್ಯತೆಯ ವಿರುದ್ಧ ಹೋರಾಡಿದರು ಇವರು ಬ್ರಾಹ್ಮಣರಾಗಿ ಹುಟ್ಟಿದರೂ ಜಾನವಾರನ್ನು ತ್ಯಜಿಸಿದರು ಹಾಗೂ ವೈದಿಕ ಆಚರಣೆಗೆ ಹೆಚ್ಚು ಮಹತ್ವ ಕೊಡದೆ ಬ್ರಾಹ್ಮಣ ಸಂಪ್ರದಾಯದವರೂ ಧರಿಸುವ ಜಾನುವಾರವನ್ನು ತ್ಯಜಿಸಿದರು.
ಇವರೂ ಮಾನವರೆಲ್ಲರೂ ಒಂದೇ ಎಂಬ ನೀತಿಯನ್ನು ಜಗತ್ತಿಗೆ ಸಾರಿದರೂ ಇವರೂ ವೈದಿಕ ಆಚರಣೆಗಳಿಗಿಂತಲೂ ಹೆಚ್ಚು ಮಹತ್ವವನ್ನು ಕಾಯಕ ಮತ್ತು ಸಮಾನತೆ ಹಾಗೂ ಲಿಂಗಪೂಜೆಗೆ ನೀಡಿದರು .
ಇವರು ತಾವು ಮಂತ್ರಿಯಾಗಿದ್ದಾಗ ಅನುಭವ ಮಂಟಪವನ್ನು ಸ್ಥಾಪಿಸಿದರು ಅನುಭವ ಮಂಟಪವು ಹಲವಾರು ಜನ ಶರಣರಿಗೆ ತಮ್ಮ ಆಧ್ಯಾತ್ಮಿಕ ವಿಚಾರಗಳನ್ನು ವ್ಯಕ್ತಪಡಿಸಲು ಅನೂಕೂಲಕರ ವೇದಿಕೆಯಾಯಿತು . ಬಸವಣ್ಣನವರ ಅನುಭವ ಮಂಟಪದಲ್ಲಿ ಹಲವಾರು ಶರಣರಿದ್ದರು .ಬಸವಣ್ಣನವರ ಕಾಲದಲ್ಲಿ ಹಲವಾರು ವಚನಗಳು ರಚನೆಯಾದವು ಹಾಗೂ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಯತ್ನಿಸಿದರು ಹಾಗೂ ದಾಸೋಹಕ್ಕೂ ಕೂಡಾ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು.
           ಓಂ ಶ್ರೀ ಗುರು ಬಸವಲಿಂಗಾಯ ನಮಃ          
ಇವರು ಪ್ರಾಣಿಹಿಂಸೆಯನ್ನು ವಿರೋಧಿಸಿದರು ಹಾಗೂ ಸಮಾಜದಲ್ಲಿರುವ ಹಲವಾರು ಮೌಢ್ಯಗಳನ್ನು ನಿವಾರಿಸಲು ತಮ್ಮ ನಿರಂತರ ಶ್ರಮ ವಹಿಸಿದರು ಇವರು ಆಗಿನ ಕಾಲದಲ್ಲಿಯೇ ಸ್ತ್ರೀ ಪುರುಷ ಹಾಗೂ ಎಲ್ಲ ವರ್ಗದ ಜನಾಂಗ ಒಂದೇ ಎಂಬ ನೀತಿಯನ್ನು ವಿಶ್ವಕ್ಕೆ ಸಾರಿದರು ಹಾಗೂ ಮಾನವೀಯ ತತ್ವಗಳಿಂದ ಆಧಾರವಾದ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು.

      ಓಂ ನಮಃ ಶಿವಾಯ       ಹರ ಹರ ಮಹಾದೇವ    

Popular posts from this blog

ಸಿದ್ಧಾರೂಢರು (ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ)

ಬದಾಮಿ ಬನಶಂಕರಿ ದೇವಸ್ಥಾನ