Posts

ಸಿದ್ಧಾರೂಢರು (ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ)

Image
                  ಸದ್ಗುರು ಸಿದ್ಧಾರೂಢರು                      ಹುಬ್ಬಳ್ಳಿಯು ಎಷ್ಟು ಪ್ರಸಿದ್ಧವೂ ಅಷ್ಟೇ ಹುಬ್ಬಳಿಯಲ್ಲಿ ಸಿದ್ಧಾರೂಢ ಅಜ್ಜನ ಮಠವೂ ಪ್ರಸಿದ್ಧ ಸತತ ದಾಸೋಹ ಶಿಕ್ಷಣದಿಂದ ಅಜ್ಜನ ಮಠವು ಪ್ರಸಿಧ್ಧವಾಗಿದೆ. ಬಂದ ಭಕ್ತರು ಹಸಿದವರು ಪ್ರಸಾದ ಸೇವಿಸಿ ಅಜ್ಜನ ಆಶಿರ್ವಾದ ತೆಗೆದುಕೊಂಡು ಹಿಂತಿರುಗುತ್ತಾರೆ. ಸಿದ್ಧಾರೂಡರು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಮುಕ್ತವಾಗಿ ಪಠಣ ಮಾಡಲು ಸಾರಿದರು.           ಇವರು ಮೂಲತಃ ಚಳಕಾಪುರದವರೂ ಜನನ 1836 ಇವರು ತಮ್ಮ 6ನೇಯ ವಯಸ್ಸಿನಲ್ಲಿಯೇ ಮನೆಯನ್ನು  ಬಿಟ್ಟು ಹೊರಬಂದು ಗುರುಗಳಿಗಾಗಿ ಹುಡುಕಾಟ ನಡೆಸಿದರು ಅನಂತರ ಇವರು ದೇಶದ ನಾನಾ ಭಾಗಗಳಲ್ಲಿ ಸಂಚಾರ ಮಾಡಿ ಹುಬ್ಬಳ್ಳಿಯ ಜನರ ಪುಣ್ಯವೇನೋ ಹುಬ್ಬಳ್ಳಿಯಲ್ಲಿ ನೆಲೆಸಿದರು ಯಾವುದೇ ತಾರತಮ್ಯವಿಲ್ಲದೆ ನಂಬಿ ಬಂದ ಭಕ್ತರನ್ನು ಅಭಯ ಹಸ್ತವನ್ನಿಟ್ಟು ರಕ್ಷಿಸಿದರು. ಗುರುನಾಥರೂಡರು ಸಿದ್ಧಾರೂಢರ ಶಿಷ್ಯರಾಗಿದ್ದರು. ಅಜ್ಜನ ಮಠ ಎಷ್ಟು ಪ್ರಸಿದ್ದಿ ಹೊಂದಿತ್ತು ಅಂದರೆ ಆಗಿನ ಕಾಲದಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರು ರಾಜರು ಹಲವಾರು ಸಾಧು ಸಂತರು ಅಜ್ಜನ ಮಠಕ್ಕೆ ಬಂದು ಹೋಗುತ್ತಿದ್ದರು. ಸಿದ್ಧಾರೂಢ ಅಜ್ಜನ ರಥೋತ್ಸವ ಸಿದ್ಧಾರೂಢ ಅಜ್ಜನ ರಥೋತ್ಸವ ಪ್ರತಿ ವರ್ಷ ಎರಡು ಬಾರಿ ನಡೆತೇತಿ ಒಂದು ಬಾರಿ ಶ್ರಾವಣ ಮಾಸದಲ್ಲಿ ತೆಪ್ಪ ರಥೋತ್ಸವ ಮತ್ತ ಶಿವರಾತ್ರಿಯ ದಿನ ನಡೆಯುವ ರಥೋತ್ಸವ ಅಜ್ಜನ ಜಾತ್ರಿ ಬಂದರ ಸಾಕೂ ಹುಬ್ಬಳ್

ವಿಶ್ವಗುರು ಮಹಾಮಾನವತಾವಾದಿ ಬಸವಣ್ಣ

Image
ಬಸವಣ್ಣನವರು ಮಾದರಸ ಮತ್ತು ಮಾದಲಾಂಬಿಕೆಯ ಎಂಬ ಬ್ರಾಹ್ಮಣ ದಂಪತಿಯ ಪುತ್ರರಾಗಿ 1134ರಲ್ಲಿ ಜನಿಸಿದರು.ಇವರು ಸಮಾಜದಲ್ಲಿ ಅಸ್ಪ್ರುಷ್ಯತೆಯ ವಿರುದ್ಧ ಹೋರಾಡಿದರು ಇವರು ಬ್ರಾಹ್ಮಣರಾಗಿ ಹುಟ್ಟಿದರೂ ಜಾನವಾರನ್ನು ತ್ಯಜಿಸಿದರು ಹಾಗೂ ವೈದಿಕ ಆಚರಣೆಗೆ ಹೆಚ್ಚು ಮಹತ್ವ ಕೊಡದೆ ಬ್ರಾಹ್ಮಣ ಸಂಪ್ರದಾಯದವರೂ ಧರಿಸುವ ಜಾನುವಾರವನ್ನು ತ್ಯಜಿಸಿದರು. ಇವರೂ ಮಾನವರೆಲ್ಲರೂ ಒಂದೇ ಎಂಬ ನೀತಿಯನ್ನು ಜಗತ್ತಿಗೆ ಸಾರಿದರೂ ಇವರೂ ವೈದಿಕ ಆಚರಣೆಗಳಿಗಿಂತಲೂ ಹೆಚ್ಚು ಮಹತ್ವವನ್ನು ಕಾಯಕ ಮತ್ತು ಸಮಾನತೆ ಹಾಗೂ ಲಿಂಗಪೂಜೆಗೆ ನೀಡಿದರು . ಇವರು ತಾವು ಮಂತ್ರಿಯಾಗಿದ್ದಾಗ ಅನುಭವ ಮಂಟಪವನ್ನು ಸ್ಥಾಪಿಸಿದರು ಅನುಭವ ಮಂಟಪವು ಹಲವಾರು ಜನ ಶರಣರಿಗೆ ತಮ್ಮ ಆಧ್ಯಾತ್ಮಿಕ ವಿಚಾರಗಳನ್ನು ವ್ಯಕ್ತಪಡಿಸಲು ಅನೂಕೂಲಕರ ವೇದಿಕೆಯಾಯಿತು . ಬಸವಣ್ಣನವರ ಅನುಭವ ಮಂಟಪದಲ್ಲಿ ಹಲವಾರು ಶರಣರಿದ್ದರು .ಬಸವಣ್ಣನವರ ಕಾಲದಲ್ಲಿ ಹಲವಾರು ವಚನಗಳು ರಚನೆಯಾದವು ಹಾಗೂ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಯತ್ನಿಸಿದರು ಹಾಗೂ ದಾಸೋಹಕ್ಕೂ ಕೂಡಾ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು.            ಓಂ ಶ್ರೀ ಗುರು ಬಸವಲಿಂಗಾಯ ನಮಃ           ಇವರು ಪ್ರಾಣಿಹಿಂಸೆಯನ್ನು ವಿರೋಧಿಸಿದರು ಹಾಗೂ ಸಮಾಜದಲ್ಲಿರುವ ಹಲವಾರು ಮೌಢ್ಯಗಳನ್ನು ನಿವಾರಿಸಲು ತಮ್ಮ ನಿರಂತರ ಶ್ರಮ ವಹಿಸಿದರು ಇವರು ಆಗಿನ ಕಾಲದಲ್ಲಿಯೇ ಸ್ತ್ರೀ ಪುರುಷ ಹಾಗೂ ಎಲ್ಲ ವರ್ಗದ ಜನಾಂಗ ಒ

ಬದಾಮಿ ಬನಶಂಕರಿ ದೇವಸ್ಥಾನ

Image
ಬದಾಮಿಯ ಬನಶಂಕರಿಯು ಅತ್ಯಂತ ಪುರಾತನ ದೇವಸ್ಥಾವಾಗಿದ್ದು ಇದರ ನಿರ್ಮಾಣದ ಅವಧಿ ಅಂದಾಜು 7ನೇ ಶತಮಾನ. ಇದು ಚಾಲುಕ್ಯರಿಂದ ನಿರ್ಮಾಣವಾದ ದೇವಾಲಯವಾಗಿದ್ದು ತಾಯಿ ಬನಶಂಕರಿ ದೇವಿಯು ಚಾಲುಕ್ಯರ ಆರಾಧ್ಯ ದೈವವಾಗಿದ್ದಾಳೆ. ತಾಯಿ ಬನಶಂಕರಿಯು ಅರಣ್ಯದಲ್ಲಿ ವಾಸವಾಗಿರುವುದರಿಂದ ತಾಯಿಗೆ ಬನಶಂಕರಿ ಅಥವಾ ವನಶಂಕರಿ ಎಂದು ಹೆಸರು ಬಂದಿತು. ಭೂಮಿಯಲ್ಲಿ ಮಳೆ ಹಾಗೂ ಬೆಳೆ ಇಲ್ಲದ ಸಮಯದಲ್ಲಿ ಭಕ್ತರೆಲ್ಲರೂ ಹಸಿವಿನಿಂದ ಬಳಲುತ್ತಿರುವಾಗ ದೇವಿಯು ತನ್ನ ದೇಹದ ಶಾಖದಿಂದ ಹಣ್ಣು ಮತ್ತು ಹಂಪಲು ಉತ್ಪತ್ತಿ ಮಾಡಿ ಆಹಾರವನ್ನು ನೀಡಿ ತಾಯಿಯು ಭಕ್ತರನ್ನು ಹರಸಿದಳು ಅದಕ್ಕಾಗಿ ದೇವಿಯನ್ನು ಶಾಖಂಬರಿ ದೇವಿ ಎಂದು ಕರೆಯುತ್ತಾರೆ. ದೇವಿಗೆ ಭಕ್ತರು ರಾಜ್ಯ ರಾಜ್ಯಗಳಿಂದ ಬಂದು ಪೂಜೆಯನ್ನು ಸಲ್ಲಿಸುತ್ತಾರೆ ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ದೇವಿಗೆ ಅತಿ ಹೆಚ್ಚು ಭಕ್ತರಿದ್ದಾರೆ.ದೇವಸ್ಥಾನದ ಸುತ್ತ ಹವನ ಮಂಟಪ,ಆಂಜನೇಯನ ಮೂರ್ತಿ, ಶಿವ ಹಾಗೂ ಹಲವಾರು ದೇವತೆಗಳು ವಾಸವಾಗಿದ್ದಾರೆ. ತೀರ್ಥಗಳು ದೇವಾಲಯದ ಸುತ್ತಲೂ ಹಲವಾರು ತೀರ್ಥಗಳು ಇದ್ದು ಬಂದ ಭಕ್ತರ ಪಾಪವನ್ನು ನಾಶ ಮಾಡಿ ಪುನೀತಗೊಳಿಸುತ್ತವೆ ಇದರಲ್ಲಿ ಮಾಲಿನಿ ತೀರ್ಥ, ಹರಿದ್ರಾ ತೀರ್ಥ, ಸರಸ್ವತಿ ತೀರ್ಥ, ಅಗಸ್ತ್ಯ ತೀರ್ಥ ,ಪದ್ಮ ತೀರ್ಥ, ತೈಲ ತೀರ್ಥ, ರಂಗ ತೀರ್ಥ, ಅಶ್ವತ ತೀರ್ಥ, ಭಾಸ್ಕರ ತೀರ್ಥ, ಕೋಟಿ ತೀರ್ಥ, ನಾಗೇಶ ತೀರ್ಥ, ವಿಷ್ಣು ಪುಷ್ಕರಣೆ,ವಶಿಷ್ಟ,ಕಶ್ಯಪ,ಅತ್ರಿ,ಭಾರದ್ವಾಜ,ವಿಶ್ವಾಮಿತ್ರ